ಶ್ರೀಪೂರ್ಣ ಗಬ್ಲಡ್ಕ ಇವರು ಪಿಯುಸಿ ಕಲಾವಿಭಾಗದ ಎರಡನೇ ವರ್ಷದ ಪರೀಕ್ಷೆಯಲ್ಲಿ 600 ರಲ್ಲಿ 588 ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ ಮತ್ತು ರಾಜ್ಯಕ್ಕೆ 9 ನೇ ರಾಂಕ್ ಪಡೆದುಕೊಂಡಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಇಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಮ್ಮ ಪ್ರತಿಭೆಯ ಮೂಲಕ ಹಲವು ರಂಗಗಳಲ್ಲಿ ಮಿಂಚುತ್ತಿದ್ದಾರೆ.
ಇವರು ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಲಕ್ಷ್ಮೀಶ ಗಬ್ಲಡ್ಕ ಮತ್ತು ಉದ್ಯಮಿ ಕುಮುದಾ ಜಿ ಎಲ್ ರವರ ಪುತ್ರಿ.

