ರಸ್ತೆ ಬದಿ ಕಸ ಎಸೆದು ದಂಡ ಕಟ್ಟಿಸಿಕೊಂಡ ಅಂಗಡಿ ಮಾಲೀಕ

ರಸ್ತೆ ಬದಿ ಕಸ ಎಸೆದ ಪ್ರಕರಣದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಕ್ರಮ ಕೈಗೊಂಡಿದ್ದು ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.

ಐವರ್ನಾಡು ರಸ್ತೆ ಬದಿಯಲ್ಲಿ ಕಸ ಕಂಡು ಬಂದಿದ್ದು ಪರಿಶೀಲಿಸಿದಾಗ ಸುಳ್ಯದ ಅಂಗಡಿಯೊಂದರ ಬಿಲ್ಲು ರಿಸೀಪ್ಟ್ ಗಳು ಅದರ ಜತೆ ಕಾಣಿಸಿದ್ದು ಫೋನು ಮಾಡಿದಾಗ ಮೊದಲು ನಿರಾಕರಿಸಿದರೆಂದೂ ಮತ್ತಷ್ಟು  ವಿಚಾರಣೆ ನಡೆಸಿದಾಗ ಒಪ್ಪಿಕೊಂಡರೆಂದೂ ತಿಳಿದುಬಂದಿದೆ. ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡಲಾಯಿತೆಂದು ಪೋಲೀಸ್ ಮೂಲಗಳು ತಿಳಿಸಿವೆ.

ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ. ಪರಿಸರ ಸ್ವಚ್ಚತೆ ನಮ್ಮೆಲ್ಲರ ಆದ್ಯತೆ ಆಗಿರಲಿ.

Leave a Reply

Discover more from

Subscribe now to keep reading and get access to the full archive.

Continue reading