ಜನಪ್ರಿಯ ಹಾಲ್ ನಲ್ಲಿ ಸುಜ್ಞಾನ ಸಂಗಮ

ಮಾಣಿ : ಕನ್ಯಾನ ಉಸ್ತಾದ್ ಎಂದೇ ಖ್ಯಾತಿ ಹೊಂದಿರುವ ಶೈಖುನಾ ಇಬ್ರಾಹಿಂ ಫೈಝಿ ಮಿತ್ತೂರು ಉಸ್ತಾದರ ಶಿಷ್ಯಂದಿರ ಸಂಘಟನೆಯಾದ “ಜಂಇಯ್ಯತು ತ್ತ‌ರ್ಬಿಯ್ಯತಿಲ್ ಅನ್ಸಾರಿಯ್ಯ”ಎಂಬ ಸಂಘಟನೆಯ ವತಿಯಿಂದ ದರ್ಸ್ ರಂಗದಲ್ಲಿ ನಲ್ವತ್ತು ವರ್ಷಗಳ ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ “ಸುಜ್ಞಾನ ಸಂಗಮ ” ಎಂಬ ಕಾರ್ಯಕ್ರಮವನ್ನು ಎಪ್ರಿಲ್ 14 ಮಂಗಳವಾರ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಸಂಜೆ 5 ಗಂಟೆಯಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ,ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸುವರು,ಸೂಫಿ ವರ್ಯರಾದ ಮಹ್ಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸುವರು,ತ್ವರೀಕತ್ ವಿಷಯದಲ್ಲಿ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮತ್ತು ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಿಕೊಡುವರು,ಹಲವಾರು ಸಯ್ಯಿದ್ ಗಳು ಉಲಮಾ ಉಮರಾ ಸಾಮಾಜಿಕ ನೇತಾರರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading