ಬಿಎಂಎಸ್ ವತಿಯಿಂದ ದೇಶವ್ಯಾಪಿ ಪ್ರತಿಭಟನೆ ಘೋಷಣೆ

ಭಾರತೀಯ ಮಜ್ದೂರ್ ಸಂಘ (BMS), ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆಟೋ ರಿಕ್ಷಾ ಚಾಲಕ-ಮಾಲಕರ ಹಕ್ಕುಗಳಿಗಾಗಿ, ಸಾಮಾಜಿಕ ಭದ್ರತೆಗಾಗಿ, ಜೀವನೋಪಾಯದ ರಕ್ಷಣೆಗಾಗಿ ಹಾಗೂ ಗೌರವಯುತ ಬದುಕಿಗಾಗಿ ಒಗ್ಗಟ್ಟಾಗಿ ಮುಂಡೆ ಬನ್ನಿ, ನಮ್ಮ ಹಕ್ಕು – ನಮ್ಮ ಹೋರಾಟ ಎಂಬ ಘೋಷಣೆಯೊಂದಿಗೆ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯು ದಿನಾಂಕ 18-08-2026 ಮಂಗಳವಾರದಂದು ಬೆಳಿಗ್ಗೆ 11.00 ಕ್ಕೆ ಮಂಗಳೂರಿನ ಟೌನ್‌ಹಾಲ್ ಮುಂಭಾಗ ನಡೆಯಲಿದೆ. ನಮ್ಮ ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಹಕ್ಕುಗಳಿಗಾಗಿ, ಸಾಮಾಜಿಕ ಭದ್ರತೆಗಾಗಿ, ಜೀವನೋಪಾಯದ ರಕ್ಷಣೆಗಾಗಿ ಮತ್ತು ಗೌರವಯುತ ಬದುಕಿಗಾಗಿ ಒಗ್ಗಟ್ಟಾಗಿ ಹೋರಾಡೋಣ ಎಂದು ತಿಳಿಸಲಾಗಿದೆ.

ಇದರ ಆಯೋಜಕರು ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.), ಬಿ.ಎಂ.ಎಸ್. ಸಂಯೋಜಿತ, ಸುಳ್ಯ ಆಗಿದ್ದು, “ಶ್ರಮವೇ ಆರಾಧನೆ” ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

Leave a Reply

Discover more from

Subscribe now to keep reading and get access to the full archive.

Continue reading