ಜೇ.ಸಿ.ಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯದ ವಿವೇಕಾನಂದ ವೃತ್ತದ ಬಳಿ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಜೇಸಿಐ ಸುಳ್ಯ ಪಯಸ್ವಿಯ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಗವತಿ ಯುವ ಸೇವಾ ಸಂಘ, ಬೂಡು ಕೇರ್ಪಳ ಇದರ ಅಧ್ಯಕ್ಷರಾದ ಸುನೀಲ್ ಕೇರ್ಪಳ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿಯ ಪೂರ್ವಾಧ್ಯಕ್ಷರಾದ ಜೇ. ಎಪ್. ಎಂ. ಗುರುಪ್ರಸಾದ್ ನಾಯಕ್, ಸಾಮಾಜಿಕ ಮುಖಂಡರಾದ ಸುಪ್ರೀತ್ ಮೋಂಟಡ್ಕ, ನಿಲಯದ ಮೇಲ್ವಿಚಾರಕಾದ ಸುಹಾಸಿನಿ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ದೇಶಭಕ್ತಿಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.