ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಮಧುಮೇಹ (ಶುಗರ್) ತಪಾಸಣಾ, ಉಚಿತ ಫ್ಯಾಟಿ ಲಿವರ್ ಹಾಗೂ ಕಿವಿ ತಪಾಸಣೆ ಶಿಬಿರ

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ (ಶುಗರ್) ತಪಾಸಣಾ ಶಿಬಿರ ಹಾಗೂ ಉಚಿತ ಫ್ಯಾಟಿ ಲಿವರ್ ತಪಾಸಣೆ (ಫೈಬ್ರೋ ಸ್ಕ್ಯಾನ್) ಹಾಗೂ ಉಚಿತ ಕಿವಿ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು .ಶಿಬಿರದಲ್ಲಿ ಮಧುಮೇಹ ತಪಾಸಣೆಯ ಭಾಗವಾಗಿ HBA1ಸಿ ಟೆಸ್ಟ್ ಕೂಡ ನಡೆಸಲಾಯಿತು.ನುರಿತ ವೈದ್ಯಕೀಯ ತಜ್ಞರಾದ ಮೆಡ್ ಲ್ಯಾಂಡ್ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ ವಿಶಾಲ್ ಯು ಪಿ ಮತ್ತು ಮಧುಮೇಹ ತಜ್ಞರಾ ಗಿರುವ ಡಾ ಸ್ವಾತಿ ಪಿ ಇವರು ಸಂದರ್ಶಕ ವೈದ್ಯರುಗಳಾಗಿ ಸೇವೆ ಸಲ್ಲಿಸಿದರು.ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದರು.ಮೆಡ್ ಲ್ಯಾಂಡ್ ಆಸ್ಪತ್ರೆಯ ಆಡಳಿತ ಮಂಡಳಿಯ ಸಿಬ್ಬಂದಿಗಳು ಸಹಕರಿಸಿದರು ಪಿ.ಸಿ.ಸಿ ಅಖಿಲ್ ವೈ ಕಾರ್ಯಕ್ರಮ ನಿರ್ವಹಿಸಿದರು.

ನಿಮ್ಮದೊಂದು ಉತ್ತರ