ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಅಧ್ಯಕ್ಷರಾದ ಉನೈಸ್ ಪೆರಾಜೆ ಯವರ ಸಾರಥ್ಯದಲ್ಲಿ ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬೃಹತ್ ಕರ್ನಾಟಕ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸುಮಾರು ಶೇಕಡಾ ಹದಿನೈದರಷ್ಟು ಕನ್ನಡಿಗರನ್ನು ಹೊಂದಿರುವ ಗಡಿನಾಡು ಕಾಸರಗೋಡು ಜಿಲ್ಲೆಯಿಂದ ಈ ಮಹತ್ವಾಕಾಂಕ್ಷಿ ಯಾತ್ರೆಯು ಪ್ರಾರಂಭವಾಗಲಿದೆ. ರಾಜ್ಯದ ಮುವತ್ತೊಂದು ಜಿಲ್ಲೆಗಳ ಪ್ರತಿಯೊಂದು ತಾಲೂಕಿನಲ್ಲೂ ಸಂಚರಿಸಿ, ಅಂತಿಮವಾಗಿ ರಾಜಧಾನಿಯಾದ ಬೆಂಗಳೂರಿನಲ್ಲಿ ಈ ಯಾತ್ರೆಯು ಸಮಾರೋಪಗೊಳ್ಳಲಿದೆ.
ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಡೆಯುವುದು, ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವುದು ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಈ ಅಭಿಯಾನ ನಡೆಯಲಿದೆ.
ನಮ್ಮ ನೆಲದಲ್ಲಿ ನಮ್ಮ ಭಾಷೆಯ ಶಾಲೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲು ಮತ್ತು ಸರ್ಕಾರದ ಗಮನ ಸೆಳೆಯಲು ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.







ಕನ್ನಡ ಶಾಲೆ ಕನ್ನಡ ಭಾಷೆ ಉಳಿಸುವುದು ಒಳ್ಳೆಯ ವಿಷಯ
ಆದರೆ ರಾಜ್ಯದಲ್ಲಿ 15 ಜಿಲ್ಲೆಯಲ್ಲಿ ಈಗ ಇಂಗ್ಲಿಷ್ ಮೀಡಿಯಂ ಮಾಡಿದ್ದು, ಇವರ ಹೋರಾಟದಲ್ಲಿ ಈ ಶಾಲೆಗಳು ಕೂಡ ಇರತ್ತವೆಯೇ ?
ಹಾಗಿದ್ದರೆ ಈ ಕನ್ನಡ ಶಾಲೆ ಉಳಿಸಿ ಎನ್ನುವ ಪ್ರಚಾರ ಸರಿಯಾದ ದೆಶೆಯಲ್ಲಿ ಸಾಗುತ್ತಿದೆಯೇ?
ಸರಕಾರವು ಈಗಾಗಲೇ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರ ಅಗತ್ಯವನ್ನು ಮನಗಂಡು ಆಂಗ್ಲ ಭಾಷೆಗೆ ಪ್ರೋತ್ಸಾಹವನ್ನು ಕೊಡುತ್ತಾ ಇದೆ.. ಇದು ಇವರ ಕನ್ನಡ ಶಾಲೆ ಉಳಿಸಿ ಅಭಿಯಾನ ದಲ್ಲಿ ಯಾವ ರೀತಿ ಪ್ರತಿಫಲಿಸುತ್ತದೆ ?