ಹಾಕಿ ನಂತರ ಕ್ರಿಕೆಟ್ ಜರ್ಸಿ ಬಣ್ಣ ಕೂಡಾ ಕೇಸರಿ

ಭಾರತೀಯ ಹಾಕಿ ತಂಡದ ಜೆರ್ಸಿ ಬಣ್ಣವು ಕೇಸರಿ ಬಣ್ಣಕ್ಕೆ ಬದಲಾಗುವುದರೊಂದಿಗೆ ಹೊಸ ಚರ್ಚೆಗಳು ಆರಂಭವಾಗಿವೆ.

ಪರಂಪರಾಗತವಾಗಿ ಬೆಳೆದುಬಂದಿದ್ದ ನೀಲಿ ಬಣ್ಣದ ಜೆರ್ಸಿಯ ಬದಲಿಗೆ ಕೇಸರಿ ಬಣ್ಣ ಬಂದಿರುವುದು ಕ್ರೀಡಾಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಮುಂದಿನ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯಲ್ಲೂ ಕೇಸರಿ ಬಣ್ಣ ಸ್ಥಾನ ಪಡೆಯಲಿದೆಯೇ ಎನ್ನುವ ಪ್ರಶ್ನೆಗಳು ಈಗ ಏಳುತ್ತಿವೆ.

ಹಾಕಿ ತಂಡದ ನಂತರ ಕ್ರಿಕೆಟ್ ತಂಡದಲ್ಲೂ ಜೆರ್ಸಿಯ ಬಣ್ಣ ಬದಲಾಗಬಹುದು ಎನ್ನುವ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಭಾರಿ ಸಕ್ರಿಯವಾಗಿವೆ.

Leave a Reply

Discover more from

Subscribe now to keep reading and get access to the full archive.

Continue reading