ಜುಲೈ 7ರಂದು ನಿಧನರಾದ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ದಿವಂಗತ ಗಿರೀಶ್ ಭಾರದ್ವಾಜ್ ರಿಗೆ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಶ್ರದ್ಧಾಂಜಲಿ ಸಭೆಯು ಸುಳ್ಯದ ಜೆಸಿ ಭವನದಲ್ಲಿ ಜುಲೈ 11ರಂದು ಘಟಕಾಧ್ಯಕ್ಷರಾದ ಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಿರೀಶ್ ಭಾರದ್ವಾಜರ ಭಾವಚಿತ್ರದ ಎದುರು ಎಸ್ ಪಿ ಲ್ಯಾಬ್ ನ ಮಾಲಕರಾದ ರೋ. ಬಾಲಕೃಷ್ಣ ಎಂ ಹಾಗೂ ಶ್ರೀಯುತ ಪ್ರಭಾಕರನ್ ನಾಯರ್ ದೀಪ ಬೆಳಗಿಸಿದರು.
ಎಸ್. ಬಿ. ಲ್ಯಾಬ್ ನ ಮಾಲಕರಾದ ಬಾಲಕೃಷ್ಣರವರು ಭಾರದ್ವಾಜ್ ರ ಕುರಿತು ಮಾತನಾಡಿ ಅವರ ಬದುಕು, ಸಾಧನೆ, ಜೀವನಾದರ್ಶನಗಳ ಕುರಿತು ನುಡಿ ನಮನ ಸಲ್ಲಿಸಿದರು.
ಬಳಿಕ ಜೆಸಿಐ ಸುಳ್ಯ ಇದರ ಪೂರ್ವ ಅಧ್ಯಕ್ಷರು ಜೆಸಿಐ ಭಾರತದ ಪೂರ್ವ ವಲಯ ಅಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರ್ ಭಾರದ್ವಾಜ್ ರ ಆದರ್ಶಗಳನ್ನು ಹೇಳಿದರು. ಸಭೆಯ ಕೊನೆಯಲ್ಲಿ ಭಾಗವಹಿಸಿದ ಎಲ್ಲರೂ ಪುಷ್ಪ ನಮನ ಸಲ್ಲಿಸಿದರು ಈ ನುಡಿ ನಮನ ಕಾರ್ಯಕ್ರಮದಲ್ಲಿ ಜಾತ್ಯತೀತ ಜನತಾದಳದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ನಿಹಾಲ್ ಕೋಡ್ತುಗುಳಿ ಹಾಗೂ ಸದಸ್ಯರು, ಮುಖಂಡರಾದ ಸುಪ್ರೀತ್ ಮೋಂಟಡ್ಕ, ಜೆಸಿಐ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ರಂಜಿತ್ ಕುಕ್ಕೆಟ್ಟಿ ಮತ್ತು ಜೆಸಿಐ ಸುಳ್ಯ ಪಯಸ್ವಿನಿ ಸದಸ್ಯರಾದ ಪ್ರಶಾಂತ್ ಅಂಬೇಕಲ್ಲು, ಸತ್ಯಶಾಂತಿ ತ್ಯಾಗ ಮೂರ್ತಿ ಹಾಗೂ ಅಲೆಟ್ಟಿ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯ ವಿಜಯ್ ಅಲೆಟ್ಟಿ, ಮಹೇಶ್ ಬೆಳ್ಳಾರ್ಕರ್, ಕೇಶವ , ಮಂಜುನಾಥ್ ಮಡ್ತಿಲ ಸಾರ್ವಜನಿಕರು ಉಪಸ್ಥಿತರಿದ್ದರು.