






ಸುಳ್ಯ ವಿಧಾನಸಭಾ ಕ್ಷೇತ್ರದ ಬಿಎಲ್ಎ 1 ಆದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಜಿ ಕೃಷ್ಣಪ್ಪ ಇವರ ನಿರ್ದೇಶನದ ಮೇರೆಗೆ ಸಂಪಾಜೆ ಗ್ರಾಮದ ಬಿಎಲ್ಎ 2 ಗಳಿಗೆ ಗುರುತಿನ ಚೀಟಿಗಳನ್ನು ಮತ್ತು 2002 ಮತ್ತು 2025 ರ ಮತದಾರರ ಪಟ್ಟಿಯನ್ನು ವಿತರಿಸಲಾಯಿತು. ಹಾಗೂ
ವಿವಿಧ ವಾರ್ಡ್ಗಳ ಜವಾಬ್ದಾರಿ ಹಂಚಿಕೆ ವಿವರ ಇಂತಿದೆ:
ಬೂತ್ ಸಂಖ್ಯೆ 222 -(1) ನೇ ವಾರ್ಡಿಗೆ ಜ್ಞಾನಶೀಲನ್ ವಿ (ರಾಜು) ಅವರಿಗೆ ಜವಾಬ್ದಾರಿ ನೀಡಲಾಗಿದೆ. ಬೂತ್ ಸಂಖ್ಯೆ -223 (2)ನೇ ವಾರ್ಡಿಗೆ ಬಿಎಲ್ಎ 2 ಆಗಿ ಎ.ಕೆ.ಹನೀಫ್ ಕಾರ್ಯನಿರ್ವಹಿಸಲಿದ್ದಾರೆ. ಬೂತ್ ಸಂಖ್ಯೆ -224(3)ನೇ ವಾರ್ಡಿಗೆ ಬಿಎಲ್ಎ 2 ಆಗಿ ವಸಂತ ಪೆಲ್ತಡ್ಕ ಅವರಿಗೆ ಗುರುತಿನ ಚೀಟಿ ನೀಡಲಾಯಿತು.
ಹಾಗೆಯೇ, ಬೂತ್ ಸಂಖ್ಯೆ -225(4)ನೇ ವಾರ್ಡಿಗೆ ಬಿಎಲ್ಎ 2 ಆಗಿ ಶ್ರೀಧರ ಕೆ.ಕೆ, ಬೂತ್ ಸಂಖ್ಯೆ-226(5)ನೇ ವಾರ್ಡಿಗೆ ಬಿಎಲ್ಎ 2 ಆಗಿ ಕೆರೋಲಿನ್ ಜೆ ಕ್ರಾಸ್ತ ಹಾಗೂ ಬೂತ್ ಸಂಖ್ಯೆ -227(6)ನೇ ವಾರ್ಡಿಗೆ ಬಿಎಲ್ಎ 2 ಆಗಿ ಲೂಕಾಸ್.ಟಿ.ಐ ಅವರಿಗೆ ಗುರುತಿನ ಚೀಟಿಗಳನ್ನು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕರಾದ ಕೆ ಪಿ ಜಾನಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ವಸಂತ ಪೆಲ್ತಡ್ಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎ ಕೆ ಇಬ್ರಾಹಿಮ್ ಉಪಸ್ಥಿತರಿದ್ದರು.

