ಕಾಸರಗೋಡು: ಭಾರೀ ಮಳೆಗೆ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳ ದುರ್ಮರಣ

ಕಾಸರಗೋಡು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದರ ಆವರಣ ಗೋಡೆ (ಕಾಂಪೌಂಡ್ ವಾಲ್) ಕುಸಿದು ಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ಕಾಸರಗೋಡಿನ ಅದೂರು ಸಮೀಪ ನಡೆದಿದೆ.

ಅದೂರು ಸಂಜಕಡವು ನಿವಾಸಿಯಾದ ಅಬೂಬಕ್ಕರ್ ಎಂಬವರ ಮಕ್ಕಳಾದ ಮುಸಮ್ಮಿಲ್ (14) ಮತ್ತು ಮುನ್ಸಿರ್ (10) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯ ತೇವಾಂಶಕ್ಕೆ ಮನೆಯ ಆವರಣ ಗೋಡೆಯು ಸಂಪೂರ್ಣವಾಗಿ ದುರ್ಬಲಗೊಂಡಿತ್ತು ಎನ್ನಲಾಗಿದೆ.

ಇಂದು ಇದ್ದಕ್ಕಿದ್ದಂತೆ ಗೋಡೆಯು ಕುಸಿದು ಬಿದ್ದಿದ್ದು, ಈ ವೇಳೆ ಅಲ್ಲೇ ಇದ್ದ ಇಬ್ಬರು ಮಕ್ಕಳು ಅದರಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.


ಘಟನೆಯಲ್ಲಿ ಮತ್ತೋರ್ವ ಬಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

 

Leave a Reply

Discover more from

Subscribe now to keep reading and get access to the full archive.

Continue reading