ಮಾದರಿ ಮದುವೆ ಅಭಿಯಾನದ ಪ್ರಯುಕ್ತ ವಾಹನ ಸಂದೇಶ ಜಾಥಾ

ಎಸ್‌ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ ಮಾದರಿ ಮದುವೆ ಅಭಿಯಾನದ ಸಮಾರೋಪ ಸಮ್ಮೇಳನವು ಮೇ 2ರ ಶನಿವಾರದಂದು ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮದ ಯಶಸ್ವಿಗಾಗಿ ಏಪ್ರಿಲ್ 25ರ ನಾಳೆ ಪುತ್ತೂರು ಸುನ್ನಿ ಸಂಘ ಕುಟುಂಬದ ವತಿಯಿಂದ ವಾಹನ ಸಂದೇಶ ಜಾಥಾವನ್ನು ಆಯೋಜಿಸಲಾಗಿದೆ.

 

ನಾಳೆ ಬೆಳಿಗ್ಗೆ 6:30ಕ್ಕೆ ಪುತ್ತೂರು ಕರವಡ್ತ ತಂಙಳ್ ಮಖಾಂ ಝಿಯಾರತ್‌ನೊಂದಿಗೆ ಈ ವಾಹನ ಜಾಥಾ ಆರಂಭಗೊಳ್ಳಲಿದೆ. ಬಳಿಕ ಕೂರ ಮಖಾಂ ಝಿಯಾರತ್ ನಡೆಸಿ ಸವಣೂರು, ನರಿಮೊಗರು, ಮುಕ್ವೆ ಮತ್ತು ದರ್ಬೆ ಮೂಲಕ ಮಧ್ಯಾಹ್ನ ಕುಂಬ್ರ ಮರ್ಕಝ್ ತಲುಪಲಿದೆ. ಅಲ್ಲಿ ವಿರಾಮದ ನಂತರ ಸಂಜೆ ಸಂಪ್ಯ, ಕೆಮ್ಮಾಯಿ ಮತ್ತು ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸಿ, ರಾತ್ರಿ 7:30ಕ್ಕೆ ಕಬಕ ಜಂಕ್ಷನ್‌ನಲ್ಲಿ ಜಾಥಾ ಸಮಾಪ್ತಿಗೊಳ್ಳಲಿದೆ.


ಮೇ 2ರಂದು ನಡೆಯುವ ಮುಖ್ಯ ಸಮಾರೋಪ ಸಮ್ಮೇಳನದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಎ.ಪಿ. ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್ ಮತ್ತು ಶೈಖುನಾ ಪೇರೋಡ್ ಉಸ್ತಾದ್ ಸೇರಿದಂತೆ ಹಲವಾರು ಉಲಮಾ-ಉಮರಾ ನೇತಾರರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ದಫ್ ಮತ್ತು ಇಸಾಬಾ ತಂಡಗಳ ಮೆರುಗು ನೀಡುವ ಬೃಹತ್ ಜಾಗೃತಿ ಜಾಥಾ ಕೂಡ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ವಿನಂತಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading