
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿರುವುದು ದೇಶಾದ್ಯಂತ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು 195 ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಈಗ ಒಂದು ಸಿಲಿಂಡರ್ ಬೆಲೆ ಅಂದಾಜು 2,100 ರೂಪಾಯಿಗಳಿಗೆ ತಲುಪಿದೆ.

ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಭರಿಸಲಾಗದೆ ಧೇಶಾದ್ಯಂತ ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕೆಲವು ಈಗಾಗಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ಹೋಟೆಲ್ ಮಾಲೀಕರ ಪ್ರಕಾರ, ಪ್ರಸ್ತುತ ಪರಿಸ್ಥಿತಿಯು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಎದುರಿಸಿದ ಸಂಕಷ್ಟಕ್ಕೆ ಸಮಾನವಾಗಿದೆ. ಅಂದು ಎಲ್ಲಾ ವಲಯಗಳಿಗೂ ತೊಂದರೆಯಾಗಿತ್ತು, ಆದರೆ ಈಗ ಕೇವಲ ಹೋಟೆಲ್ ಮತ್ತು ಆಹಾರ ಉದ್ಯಮದ ಮೇಲೆ ಬಾರೀ ಹೊಡೆತ ನೀಡಿದೆ. ಈ ಬೆಲೆ ಏರಿಕೆ ಪ್ರತಿಯೊಂದರ ಮೇಲೂ ವಿಪರೀತ ಪರಿಣಾಮ ಬೀರಿದೆ.
ಹೋಟೆಲ್‌ಗಳು ಮುಚ್ಚುತ್ತಿರುವುದರಿಂದ ಅಥವಾ ಲಾಭ ಕಡಿಮೆಯಾಗುತ್ತಿರುವುದರಿಂದ ಕೆಲಸಗಾರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನೇಕ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ.
ನಮಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ, ದಯವಿಟ್ಟು ಇಂತಹ ಬೆಲೆ ಏರಿಕೆಯ ಮೂಲಕ ನಮ್ಮನ್ನು ಸಂಕಷ್ಟಕ್ಕೆ ದೂಡಬೇಡಿ ಎಂದು ಹೋಟೆಲ್ ಮಾಲೀಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಣ್ಣ ಹೋಟೆಲ್ ಉದ್ಯಮವನ್ನು ಉಳಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಡುಗೆ ಅನಿಲದ ದರವನ್ನು ಕಡಿಮೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ, ಅಡುಗೆ ಅನಿಲದ ಬೆಲೆ ಏರಿಕೆಯು ಹೋಟೆಲ್ ಉದ್ಯಮದ ಬೆನ್ನೆಲುಬನ್ನೇ ಮುರಿದಿದ್ದು, ಸಾಮಾನ್ಯ ಹೋಟೆಲ್ ಗ್ರಾಹಕರ ಮೇಲೂ ಇದರ ಪರಿಣಾಮ ಬೀರುತ್ತಿದ್ದು ಆಹಾರ ಪದಾರ್ಥಗಳ ಬೆಲೆ ಬೇಕಾಬಿಟ್ಟಿ ಏರಿಸಿ ಹೋಟೆಲು ಗ್ರಾಹಕರಾದ ಜನಸಾಮಾನ್ಯನಿಗೂ ಹೊರೆಯಾಗಿದೆ. ಹೋಟೆಲು ಮಾಲಕರಿಗೆ ಬೆಲೆ ಏರಿಸದೇ ಬೇರೆ ವಿಧಿ ಇಲ್ಲ ಎಂಬಂತಾಗಿದೆ.
ಸಾಕಾರ ನ್ಯೂಸ್
ಮತ್ತಷ್ಟು ಸುದ್ದಿಗಳಿಗಾಗಿ follow ಮಾಡಿ.
ನಿಮ್ಮ ಟಿಪ್ಪಣಿ ಬರೆಯಿರಿ