
ಇತಿಹಾಸದಲ್ಲಿ ಮಾನವನ ಸಣ್ಣ ತಪ್ಪುಗಳು ಅಥವಾ ಸ್ವಾರ್ಥದ ನಿರ್ಧಾರಗಳು ಅನಿರೀಕ್ಷಿತ ದುರಂತಗಳಿಗೆ ಕಾರಣವಾದ ಅನೇಕ ಉದಾಹರಣೆಗಳಿವೆ. ಅಂತಹವುಗಳಲ್ಲಿ 1993ರಲ್ಲಿ ಅಮೆರಿಕದ ಮಿಸ್ಸೌರಿಯಲ್ಲಿ ಸಂಭವಿಸಿದ ‘ವೆಸ್ಟ್ ಕ್ವಿನ್ಸಿ’ ಪ್ರವಾಹವು ಅತ್ಯಂತ ವಿಲಕ್ಷಣವಾದುದು. ಕೇವಲ ವೈಯಕ್ತಿಕ ಕಾರಣಕ್ಕಾಗಿ ಅಣೆಕಟ್ಟನ್ನು ಹಾನಿಗೊಳಿಸಿದ ವ್ಯಕ್ತಿಯೊಬ್ಬ ಇಡೀ ಪ್ರದೇಶವನ್ನೇ ಮುಳುಗಿಸಿದ ಕಥೆ ಇದು.

1993ರ ಅಕ್ಟೋಬರ್ ತಿಂಗಳಲ್ಲಿ ಅಮೆರಿಕದ ಮಿಸ್ಸಿಸ್ಸಿಪ್ಪಿ ನದಿಯ ಉದ್ದಕ್ಕೂ ಭೀಕರ ಪ್ರವಾಹದ ಮುನ್ಸೂಚನೆ ಇತ್ತು. ನದಿ ನೀರು ನಾಡಿಗೆ ನುಗ್ಗದಂತೆ ತಡೆಯಲು ಮಿಲರ್ ಸಿಟಿ ಸಮೀಪದ ಅಣೆಕಟ್ಟಿನಂತಹ ಒಡ್ಡು ಅಥವಾ ಚಿರೆಗಳನ್ನು ಬಲಪಡಿಸಲಾಗಿತ್ತು. ಆದರೆ, ಅಕ್ಟೋಬರ್ 16ರಂದು ಅನಿರೀಕ್ಷಿತವಾಗಿ ಈ ಒಡ್ಡು ಒಡೆದು, ಮಿಸ್ಸೌರಿಯ ವೆಸ್ಟ್ ಕ್ವಿನ್ಸಿ ಭಾಗಕ್ಕೆ ನೀರು ನುಗ್ಗಿತು.
ದುರಂತದ ಹಿಂದಿದ್ದ ‘ಜೆಮ್ಸ್ ಸ್ಕಾಟ್’
ತನಿಖೆಯ ವೇಳೆ ಈ ಪ್ರವಾಹವು ನೈಸರ್ಗಿಕವಾಗಿ ಸಂಭವಿಸಿದ್ದಲ್ಲ, ಬದಲಾಗಿ ಮಾನವ ನಿರ್ಮಿತ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತು. 23 ವರ್ಷದ ಜೇಮ್ಸ್ ಸ್ಕಾಟ್ ಎಂಬ ವ್ಯಕ್ತಿ ಈ ಒಡ್ಡನ್ನು ಮನಪೂರ್ವಕವಾಗಿ ಹಾನಿಗೊಳಿಸಿದ್ದನು.
ಸ್ಕಾಟ್ ನೀಡಿದ ಹೇಳಿಕೆಯ ಪ್ರಕಾರ, ಅವನ ಪತ್ನಿ ಕೆಲಸ ಮುಗಿಸಿ ಮನೆಗೆ ಬರುವುದನ್ನು ತಡೆಯುವುದು ಅವನ ಮುಖ್ಯ ಗುರಿಯಾಗಿತ್ತು. ಪತ್ನಿ ಬರುವ ಹಾದಿಯಲ್ಲಿ ಪ್ರವಾಹ ಸೃಷ್ಟಿಯಾದರೆ, ಸಂಚಾರ ಸ್ಥಗಿತಗೊಂಡು ಆಕೆ ಅಲ್ಲಿಯೇ ಉಳಿಯಬೇಕಾಗುತ್ತದೆ, ಆ ಸಮಯದಲ್ಲಿ ತಾನು ಸ್ನೇಹಿತರೊಂದಿಗೆ ಪಾರ್ಟಿ ಮಾಡಬಹುದು ಎಂಬುದು ಅವನ ಅತಿರೇಕದ ಆಲೋಚನೆಯಾಗಿತ್ತು.
ಸ್ಕಾಟ್ ಮಾಡಿದ ಈ ಸಣ್ಣ ರಂಧ್ರವು ಮಿಸ್ಸಿಸ್ಸಿಪ್ಪಿ ನದಿಯ ಭಾರಿ ಒತ್ತಡಕ್ಕೆ ಸಿಲುಕಿ ಬೃಹತ್ ಕಂದಕವಾಯಿತು. ಇದರ ಪರಿಣಾಮವಾಗಿಸುಮಾರು 14,000 ಎಕರೆ ಕೃಷಿ ಮತ್ತು ವಸತಿ ಭೂಮಿ ಜಲಾವೃತವಾಯಿತು.ಹಲವಾರು ಮನೆಗಳು, ಕಚೇರಿಗಳು ಮತ್ತು ಗ್ಯಾಸ್ ಸ್ಟೇಷನ್‌ಗಳು ನಾಶವಾದವು. ಆ ಕಾಲದಲ್ಲಿ ಇದು ಕೋಟ್ಯಂತರ ಡಾಲರ್ ನಷ್ಟವನ್ನು ಉಂಟುಮಾಡಿತು.ಪ್ರಮುಖ ಸೇತುವೆ ಮತ್ತು ರಸ್ತೆ ಸಂಪರ್ಕಗಳು ವಾರಗಳ ಕಾಲ ಕಡಿತಗೊಂಡವು.
ಈ ಕೃತ್ಯವನ್ನು “ಸಾಂಸ್ಥಿಕ ವಿಧ್ವಂಸಕ ಕೃತ್ಯ” (Institutional Vandalism) ಎಂದು ಪರಿಗಣಿಸಲಾಯಿತು. ಸ್ಕಾಟ್ ಈ ಹಿಂದೆ ಕೂಡ ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದರಿಂದ, ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿತು. 1994ರಲ್ಲಿ ಮಿಸ್ಸೌರಿ ನ್ಯಾಯಾಲಯವು ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇಂದಿಗೂ ಜೇಮ್ಸ್ ಸ್ಕಾಟ್ ಜೈಲಿನಲ್ಲಿದ್ದಾನೆ.
ಈ ಘಟನೆಯು ಮಾನವನ ಮೂರ್ಖತನಕ್ಕೆ ಮಿತಿಯಿಲ್ಲ ಎಂಬ ಮಾತಿಗೆ ಉದಾಹರಣೆಯಾಗಿ ಉಳಿದಿದೆ. ಒಬ್ಬನ ಸ್ವಾರ್ಥದ ನಿರ್ಧಾರ ಸಾವಿರಾರು ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿತು.
ನಿಮ್ಮ ಟಿಪ್ಪಣಿ ಬರೆಯಿರಿ